ಜಿಬಿಎ ನೌಕರರ ಸಂಘವು ಕಂದಾಯ ಇಲಾಖೆ ಆಯುಕ್ತ ಮನೀಶ್ ಮೌನ್ಸಿಲ್ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮೌದ್ಗೀಲ್ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಸಂಘ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ, ಇಂದು ದಕ್ಷಿಣ ಪಾಲಿಕೆಯಲ್ಲಿ ಮೌನ ಪ್ರತಿಭಟನೆ ನಡೆಸಿ, ಕರಾಳ ದಿನವನ್ನಾಗಿ ಆಚರಿಸಲು ನೌಕರರ ಸಂಘ ಸಜ್ಜಾಗಿದೆ. ಈ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ದೂರು ನೀಡಲು ಸಂಘ ಸಿದ್ಧತೆ ನಡೆಸಿದೆ.