ರಾಯಚೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಬಳಿ ಬುಲೇರೋ ವಾಹನ ಪಲ್ಟಿ, ಮಂಟಪಲಾದ ಹತ್ತಿ
ರಾಯಚೂರು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಮುಖ್ಯ ದ್ವಾರದ ಬಳಿ ಹತ್ತಿ ತುಂಬಿಕೊಂಡು ಹೋಗುತ್ತಿದ್ದ ಬುಲೆರೋ ಪಿಕಪ್ ವಾಹನ ಪಲ್ಟಿ ಹೊಡೆದಿದೆ. ಮಲಿಯಾಬಾದ್ ಗ್ರಾಮದಿಂದ ರೈತ ಬೆಳೆದ ಹತ್ತಿಯನ್ನು ತುಂಬಿಕೊಂಡು ಬರುತ್ತಿದ್ದ ವಾಹನ ಓವರ್ಲೋಡ್ ಆಗಿರುವ ಕಾರಣ ಒಂದೆಡೆ ವಾಲಿ ಪಲ್ಟಿ ಹೊಡೆದಿದೆ. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಚಾಲಕನನ್ನು ಹೊರತೆಗೆದು, ಜೆಸಿಬಿ ಮತ್ತು ಕ್ರೇನ್ ಮುಖಾಂತರ ಪಲ್ಟಿಯಾಗಿದ್ದ ವಾಹನವನ್ನು ಎತ್ತಿದ್ದಾರೆ. ಘಟನೆಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.