ಇಳಕಲ್: ನಗರದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ
Ilkal, Bagalkot | Sep 17, 2025 ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ದೇವಶಿಲ್ಪಿ ಶ್ರೀ ವಿಶ್ವಕರ್ಮ ಜಯಂತೋತ್ಸವದ ಪ್ರಯುಕ್ತ ರಥಯಾತ್ರೆ ಸೆ.೧೭ ಬುಧವಾರ ಮಧ್ಯಾಹ್ನ ೧೨ ಗಂಟೆಗೆ ನಡೆಯಿತು. ಮುಂಜಾನೆ ಕಾಳಿಕಾದೇವಿ ದೇವಸ್ಥಾನದಿಂದ ವಾದ್ಯ ಮೇಳಗಳಿಂದ ಹೊರಟ ಶ್ರೀ ವಿಶ್ವಕರ್ಮ ಭಾವಚಿತ್ರದ ರಥಯಾತ್ರೆ ಶ್ರೀರಾಮ ಮಂದಿರ, ತರಕಾರಿ ಮಾರುಕಟ್ಟೆ, ಗಾಂದಿ ಚೌಕ್, ಗ್ರಾಮ ಚಾವಡಿಯಿಂದ ಕಂಠಿ ವೃತ್ತ, ಮರಳಿ ಕಾಳಿಕಾ ದೇವಿ ದೇವಸ್ಥಾನಕ್ಕೆ ತಲುಪಿತು. ಸಮಾಜದ ಭಾಂಧವರು ರಥಯಾತ್ರೆಗೆ ಪೂಜೆಯನ್ನು ಸಲ್ಲಿಸಿದರು. ಮೆರವಣಿಗೆಯ ನೇತೃತ್ವವನ್ನು ಸಮಾಜದ ಹಿರಿಯರಾದವೀರಭದ್ರಪ್ಪ ಹಿಪ್ಪರಗಿ, ನಾರಾಯಣಪ್ಪ ಹೂಲಗೇರಿ, ರಾಮಣ್ಣ ಮರೋಳ, ಮನೋಹರ ಕಟಗೂರ, ಜಗದೀಶ ಮರೋಳ, ಗಂಗಣ್ಣ ಬಡಿಗೇರ, ಡಾ.ನಾಗಲಿಂಗ ಪತ್ತಾರ, ವೀರಣ್ಣ