ಚಿಟಗುಪ್ಪ: ಮೀನಕೇರಾ ವೀರಭದ್ರೇಶ್ವರ ಜಾತ್ರೆ ಹಿನ್ನೆಲೆ ಮಾತೆಯರಿಂದ ತುಂಬಿದ ಕಳಶಹೊತ್ತು ಶೋಭಯಾತ್ರೆ, ನೃತ್ಯಗೈದು ಸಂಭ್ರಮಿಸಿದ ಚಿಣ್ಣರು
ತಾಲೂಕಿನ ಇತಿಹಾಸ ಪ್ರಸಿದ್ಧ ಮೀನಕೇರಾ ಗ್ರಾಮದ ಗವಿ ವೀರಭದ್ರೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 11:30ಕ್ಕೆ ಮಾತೆಯರಿಂದ ತುಂಬಿದ ಕಳಶಹೊತ್ತು ಶೋಭಾ ಯಾತ್ರೆ ನಡೆಸಲಾಯಿತು. ಈ ವೇಳೆ ಬಸವಕಲ್ಯಾಣ ಗವಿಮಠದ ಪೂಜ್ಯ ಘನಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಅವರನ್ನು ಅಲಂಕೃತ ತೆರೆದ ವಾಹನದಲ್ಲಿ ಮೆರವಣಿಗೆ ಕರೆತರಲಾಯಿತು. ಚಿಣ್ಣರು ನೃತ್ಯಗೈದು ಸಂಭ್ರಮಿಸಿದರು. ದೇವಸ್ಥಾನ ಸಮಿತಿ ಸರ್ವ ಸದಸ್ಯರು, ಗ್ರಾಮದ ಗಣ್ಯರು ಇದ್ದರು.