ಬೆಂಗಳೂರು ಉತ್ತರ: ರಸ್ತೆ ಬದಿ ಕಸ ಹಾಕ್ತಿರಾ? ಮನೆ ಬಾಗಿಲಿಗೆ ಕಸ ಬೀಳುತ್ತೆ ಹುಷಾರ್
ಗುರುವಾರ, ಹೊಸಕೆರೆಹಳ್ಳಿಯ ದತ್ತಾತ್ರೇಯ ಟೆಂಪಲ್ ರಸ್ತೆ ಮತ್ತು ಬನಶಂಕರಿ ಎರಡನೇ ಹಂತದಲ್ಲಿ, ಸ್ಥಳೀಯ ನಿವಾಸಿಗಳು ರಸ್ತೆ ಬದಿ ಕಸ ಎಸೆಯುತ್ತಿದ್ದರು. ಇದನ್ನು ಗಮನಿಸಿದ ಜಿಬಿಎ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಕಸ ಸುರಿದವರ ಮನೆ ಮುಂದೆಯೇ ಕಸದ ವಾಹನಗಳಲ್ಲಿ ತ್ಯಾಜ್ಯವನ್ನು ಸುರಿದು, 100 ರೂಪಾಯಿ ದಂಡ ವಿಧಿಸಿ ಬುದ್ದಿ ಕಲಿಸಿದ್ದಾರೆ. ಎಲ್ಲೆಂದರಲ್ಲಿ ಕಸ ಹಾಕುವವರಿಗೆ ಪಾಠ ಕಲಿಸುವ ಈ ಕ್ರಮವು ಗಮನ ಸೆಳೆದಿದೆ.