ನಗರದಲ್ಲಿ ಹಾಡುಹಗಲೇ ಮನೆಗೆ ನುಗ್ಗಿ ಬಾಲಕಿ ಮೇಲೆ ಹಲ್ಲೆ ನಡೆಸಿ ಕಳ್ಳತನಕ್ಕೆ ಯತ್ನಿಸಿದ ಘಟನೆ ವರದಿಯಾಗಿದೆ. ನಗರದ ರೆಹಮತ್ ನಗರದ ಶಹಾಬಾಬಿ ಕಾಲೋನಿಯ ನಿವಾಸಿ ಅಬ್ದುಲ್ ಖಾದರ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ದೂರುದಾರರ ಪ್ರಕಾರ, ಅಬ್ದುಲ್ ಖಾದರ್ ದಂಪತಿ ಕೆಲಸದ ನಿಮಿತ್ತ ಹೈದರಾಬಾದ್‌ಗೆ ತೆರಳಿದ್ದು, ಮನೆಯಲ್ಲಿ ಅವರ ಪುತ್ರ ಮತ್ತು 9 ವರ್ಷದ ಪುತ್ರಿ ಮಾತ್ರ ಇದ್ದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಪುತ್ರ ಸಹ ಊಟಕ್ಕಾಗಿ ಹೊರಗೆ ಹೋಗಿ, ಸುಮಾರು 45 ನಿಮಿಷಗಳ ಬಳಿಕ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಬಾಲಕಿ ಒಬ್ಬಳೇ ಇರುವುದನ್ನು ಗಮನಿಸಿದ ಅಂದಾಜು 20 ವರ್ಷದ ನಾಲ್ವರಿದ್ದ ಗುಂಪು.. ಇಬ್ಬರು ಹೊರಗೆ ನಿಂತು ಇಬ್ಬರು ಮನೆಗೆ ಒಳಗೆ ನುಗ್ಗಿ ಬಾಲಕಿಗೆ ಅವಾಚ್ಯವಾಗಿ ಬೈದು, ಕೈಯಿಂದ ಹಲ್ಲೆಗೈದು,