ಸಾಗರ ನಗರದ ಚಂದ್ರಮಾವಿನ ಕೊಪ್ಪಲು ಸಮೀಪದ ರೈಲ್ವೆ ಹಳಿ ಬಳಿ ತಾಳಗುಪ್ಪ -ಮೈಸೂರು ರೈಲಿನ ಎದುರು ವ್ಯಕ್ತಿ ಓರ್ವ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು ಲೋಕೋ ಪೈಲೆಟ್ ಸಮಯ ಪ್ರಜ್ಞೆಯಿಂದ ಜೀವ ಉಳಿದಿರುವ ಘಟನೆ ಶುಕ್ರವಾರ ಮಧ್ಯಾಹ್ನ 2 ಸುಮಾರಿಗೆ ನಡೆದಿದೆ. ತಾಳಗೊಪ್ಪದಿಂದ ಮೈಸೂರಿಗೆ ಹೋಗುತ್ತಿದ್ದ ಗಾಡಿ ಸಂಖ್ಯೆ 16205 ರೈಲು ಗಾಡಿ ನಗರ ಭಾಗದ ಚಂದ್ರಮಾವಿನ ಕೊಪ್ಪಲು ಸಮೀಪ ಬರುತ್ತಿದ್ದಂತೆ ಏಕಾಏಕಿ 61 ವರ್ಷದ ವ್ಯಕ್ತಿ ಓರ್ವ ಆ ರೈಲಿನ ಮುಂದೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದು ತಕ್ಷಣ ರೈಲುಗಾಡಿನ ಲೋಕೋ ಪೈಲೆಟ್ ಬ್ರೇಕ್ ಹಾಕಿ ವ್ಯಕ್ತಿಯ ಜೀವ ಉಳಿಸಿದ್ದಾರೆ.