ನಗರದ ಮಾಲ್ ವೊಂದರಲ್ಲಿ ಯುವತಿಯ ಖಾಸಗಿ ಅಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಭಾನುವಾರ ಮಹದೇವಪುರ ಪೊಲೀಸರು ಬಂಧಿಸಿದ್ದಾರೆ. ಗುವಾಹಟಿ ಮೂಲದ ಮನೋಜ್ ಬಂಧಿತ ಆರೋಪಿ. ಡಿಸೆಂಬರ್ 25ರಂದು ಮಾಲ್ ನಲ್ಲಿ ಸ್ನೇಹಿತೆಯರೊಂದಿಗೆ ಕ್ರಿಸ್ ಮಸ್ ಆಚರಿಸುತ್ತಿದ್ದ ವೇಳೆಯಲ್ಲಿ ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ವಿಕೃತಿಯನ್ನು ಮೆರೆದಿದ್ದನು. ಈ ವೇಳೆಯಲ್ಲಿ ಸ್ಥಳದಲ್ಲಿದ್ದ ಮಹದೇವಪುರ ಠಾಣೆಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಮನೋಜ್ ಶಾ ವಿರುದ್ಧ ಮಹದೇವಪುರ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.