ತಮ್ಮ ಇತ್ತೀಚಿನ 'ಲವ್ ಓಟಿಪಿ' ಸಿನಿಮಾ ತೆರೆಕಂಡ ಬಳಿಕ ನಟ ಅನೀಶ್ ಅವರು ಕಣ್ಣೀರಿಟ್ಟಿದ್ದಾರೆ. ಉತ್ತಮ ವಿಮರ್ಶೆಗಳು ಬಂದರೂ, ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ. ಖಾಲಿ ಹೊಡೆಯುತ್ತಿರುವ ಥಿಯೇಟರ್ಗಳನ್ನು ನೋಡಿ, ಕಳೆದ 14 ವರ್ಷಗಳ ತಮ್ಮ ಶ್ರಮಕ್ಕೆ ಫಲ ಸಿಗುತ್ತಿಲ್ಲ ಎಂದು ಅವರು ನೋವು ತೋಡಿಕೊಂಡಿದ್ದಾರೆ.