ಕಲಬುರಗಿ: ಪಾಲಿಕೆಯಲ್ಲಿನ ಇ-ಖಾತಾ ಅಕ್ರಮ ತನಿಖೆ ಮುಂದುವರಿದಿದೆ: ನಗರದಲ್ಲಿ ಲೋಕಾಯುಕ್ತ ಎಸ್ಪಿ ಸಿದ್ದರಾಜು
ಕಲಬುರಗಿ : ಕಲಬುರಗಿ ಮಹಾನಗರ ಪಾಲಿಕೆಯಲ್ಲಿನ ನಡೆದಿರೋ ಇ-ಖಾತಾ ಅಕ್ರಮ ಸಂಬಂಧ ಪಾಲಿಕೆಯ 3 ವಲಯ ಕಚೇರಿ ಹಾಗೂ ಖಾಸಗಿ ಬಿಲ್ಡರ್ಸ್ ಸಂಸ್ಥೆಗಳ ಮೇಲೆ ಲೋಕಾ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ, ತನಿಖೆ ಮತ್ತಷ್ಟು ಚುರುಕು ಗೊಳಿಸಲಾಗಿದೆಯೆಂದು ಲೋಕಾಯುಕ್ತ ಎಸ್ಪಿ ಸಿದ್ದರಾಜು ಹೇಳಿದ್ದಾರೆ.. ಸೆ16ರಂದು ಸಂಜೆ 4 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ದಾಳಿ ವೇಳೆ ಪಾಲಿಕೆಯ ಇ-ಖಾತಾ ಕಡತಗಳು ಖಾಸಗಿ ಬಿಲ್ಡರ್ಸ್ ಸಂಸ್ಥೆಗಳಲ್ಲಿ ಪತ್ತೆಯಾಗಿದೆ.. ಜೊತೆಗೆ 8.36 ಲಕ್ಷ ಅಕ್ರಮ ಹಣ ಪತ್ತೆಯಾಗಿದೆ.. ಇವೆಲ್ಲದವರ ಬಗ್ಗೆ ತನಿಖೆ ಮತ್ತಷ್ಟು ಆಳಕ್ಕೆ ನಡೆಸಲಾಗ್ತಿದೆಯೆಂದು ಎಸ್ಪಿ ಹೇಳಿದ್ದಾರೆ