ರಾಯಚೂರು: ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಹತ್ತಿ, ಭತ್ತ, ತೊಗರಿ ಮತ್ತು ಈರುಳ್ಳಿ ಬೆಳೆ ನಾಶ; ರೈತ ಕಂಗಾಲು
ಜಿಲ್ಲೆಯಲ್ಲಿ ಸತತ ಸುರಿಯುತ್ತಿರುವ ಮಳೆಯಿಂದಾಗಿ ಹತ್ತಿ, ತೊಗರಿ, ಈರುಳ್ಳಿ ಬೆಳೆಗಳು ಹಾನಿಗೀಡಾಗುತ್ತಿವೆ. ರವಿವಾರವೂ ಸಹ ಜಿಲ್ಲೆಯ ರಾಯಚೂರು, ಸಿಂಧನೂರು, ಮಸ್ಕಿ, ಮುದಗಲ್, ಸಿರವಾರ, ಲಿಂಗಸಗೂರು ಸೇರಿ ಹಲವೆಡೆ ಮಳೆ ಸುರಿಯುತ್ತಿದೆ. ಈಗಾಗಲೇ ಹತ್ತಿ ಬೆಳೆಗೆ ತೇವಾಂಶ ಹೆಚ್ಚಳ ಕಾರಣದಿಂದಾಗಿ ಲದ್ದಿ ಹುಳು ಆವರಿಸಿದೆ. ಈರುಳ್ಳಿ ಬೆಳೆ ಮಳೆಗೆ ಕೊಳೆತು ಹಾಳಾಗುತ್ತಿದೆ. ಇನ್ನು ಭತ್ತದ ಬೆಳೆಗೆ ಮಾರಕ ವೈರಸ್, ದುಂಡಾಣು ರೋಗ ಉಲ್ಭಣಿಸಿದೆ. ಇನ್ನು ನಿರಂತರ ಮಳೆಗೆ ತೇವಾಂಶ ಹೆಚ್ಚಳಗೊಂಡು ತೊಗರಿ ಬೆಳೆ ಹಳದಿ ಬಣ್ಣಕ್ಕೆ ತಿರುಗುತ್ತಿದೆ. ರೈತರು ಅಕ್ಷರಶಃ ಕಂಗಾಲಾಗಿದ್ದು, ಕೂಡಲೇ ಹಾನಿ ಸಮೀಕ್ಷೆ ನಡೆಸಿ ವೈಜ್ಞಾನಿಕ ಪರಿಹಾರ ನೀಡಲು ರೈತರು ಆಗ್ರಹಿಸಿದ್ದಾರೆ.