ಚಿತ್ರದುರ್ಗದ ಕಾವಾಡಿಗರಹಟ್ಟಿ ಪ್ರಕರಣ ನಡೆದು ಎರಡು ವರ್ಷ ಉರುಳಿದೆ. ಆದರೆ ಅಲ್ಲಿನ ಜನರ ಸಮಸ್ಯೆ ಮಾತ್ರ ಇದುವರೆಗೆ ಬಗೆಹರಿದಿಲ್ಲ. ಹೈವೆ ರಸ್ತೆ ನಿರ್ಮಾಣ ಹಿನ್ನೆಲೆ ಮನೆ ಖಾಲಿ ಮಾಡುವಂತೆ NHI ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಇದರಿಂದ ಸಾರ್ವಜನಿಕರು ಮನೆ ಖಾಲಿ ಮಾಡುವ ಆತಂಕದಲ್ಲಿದ್ದಾರೆ. ಅಲ್ಲದೇ ಸರಿಯಾದ ಸಮರ್ಪಕ ಪರಿಹಾರ ಕೂಡಾ ನೀಡಿಲ್ಲ ಅಂತ ಆರೋಪಿಸಲಾಗಿದೆ. ಇನ್ನೂ ಪ್ರಕರಣ ನಡೆದಾಗ ಉಚಿತ ಸೈಟ್ ನೀಡಿ, ಮನೆ ಕಟ್ಟಿಕೊಡುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಸೈಟ್ ನೀಡಿಲ್ಲ, ಆದರೆ ಮನೆ ಖಾಲಿ ಮಾಡಲು ನೋಟಿಸ್ ನೀಡಿದ್ದಾರೆ. ಇದರಿಂದ ಮನೆ ಖಾಲಿ ಮಾಡಿದ್ರೆ ಬೀದಿಗೆ ಬೀಳುವ ಆತಂಕವನ್ನ ಜನರು ವ್ಯಕ್ತಪಡಿಸಿದ್ದಾರೆ. ಇದರಿಂದ ಮನೆ ಕಟ್ಟಿಕೊಳ್ಳಲು ಸೈಟ್ ನೀಡಿ, ಬಳಿಕ ಮನೆ ಖಾಲಿ ಮಾಡುತ್ತೇವೆ ಎಂದಿದ್ದಾರೆ