ರಾಯಚೂರು ಮಹಾನಗರ ಪಾಲಿಕೆ ಆಯುಕ್ತರಾದ ಜುಬಿನ್ ಮಹಾಪಾತ್ರ ಅವರು ಬುದವಾರ ರಾಯಚೂರು ನಗರದಲ್ಲಿ ಸಿಟಿ ಬೀಟ್ ನಡೆಸಿದರು. ರಸ್ತೆಯಲ್ಲಿನ ತಗ್ಗು ಗುಂಡಿಗಳನ್ನು ಮುಚ್ಚುವ ಕಾರ್ಯ ಮತ್ತು ಚರಂಡಿ ಸರಿಪಡಿಸುವ ಕಾಮಗಾರಿಗಳನ್ನು ಖುದ್ದು ಪರಿಶೀಲಿಸಿದರು. ಪಾಲಿಕೆ ಎಂಜಿನಿಯರಿಂಗ್ ತಂಡ ಮತ್ತು ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ನಗರ ಸುತ್ತಾಡಿದ ಆಯುಕ್ತರು, ಬಾಕಿ ಇರುವ ಎಲ್ಲಾ ರಸ್ತೆಗಳ ಮತ್ತು ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮುಂದಿನ 3 ತಿಂಗಳ ಕಾಲವಕಾಶದ ಗಡುವು ವಿದಿಸಿದರು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.