ಗುಂಡ್ಲುಪೇಟೆ: ಬಂಡೀಪುರದಲ್ಲಿ ಡ್ರೋನ್ ಟೀಂ ಗೆ ರಾತ್ರಿ ವೇಳೆ ಏನು ಕೆಲಸ, ಪರಿಸರವಾದಿ ಜೋಸೆಫ್ ಹೂವರ್ ಆಕ್ರೋಶ
ಗುಂಡ್ಲುಪೇಟೆ ಪಟ್ಟಣಲ್ಲಿ ಪರಿಸರವಾದಿ ಜೋಸೆಫ್ ಹೂವರ್ ಮಾತನಾಡಿ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ವೇಳೆ ಖಾದಗಿ ಜೀಪ್ ವಾಹನ ತೆಗೆದುಕೊಂಡು ಅರಣ್ಯದೊಳಗೆ ವ್ಯಕ್ತಿಗಳು ಪ್ರವೇಶ ಮಾಡಿದ್ದಾರೆ. ಇವರು ಡ್ರೋನ್ ಟೀಂ ಎಂದು ಮಾಹಿತಿ ಬಂದಿದೆ. ಮೊದಲು ಇವರು ಖಾಸಗಿ ಜೀಪ್ ಅನ್ನು ಅರಣ್ಯದೊಳಗೆ ಹೋಗುವಾಗಿಲ್ಲ, ಇನ್ನೂ ರಾತ್ರಿ ವೇಳೆಯಲ್ಲಿ ಇವರಿಗೆ ಏನು ಕೆಲಸ. ರಾತ್ರಿ ವೇಳೆ ಪ್ರವೇಶ ಇಲ್ಲ ಅಂತ ಗೊತ್ತಿದ್ದರು ಅರಣ್ಯ ಅಧಿಕಾರಿಗಳು ಇವರನ್ನು ಯಾಕೆ ಅರಣ್ಯದೊಳಗೆ ಬಿಟ್ಟಿದ್ದಾರೆ. ಪ್ರಾಣಿ ಅಟ್ಯಾಕ್ ಹಾಗೂ ಜೀಪ್ ಸಿಲುಕಿ ಪ್ರಾಣಿಗಳು ಸತ್ತರೆ ಯಾರು ಹೊಣೆ ಎಂದು ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು