ಚಿಂತಾಮಣಿ: ರೈತರು ಹಾಗೂ ಸಾರ್ವಜನಿಕರಿಗೆ ಉತ್ಕೃಷ್ಟ ಹಾಗೂ ಉತ್ತಮವಾದ ಗುಡ್ಡೇ ಮಾಂಸವನ್ನು ನೀಡಲು ಮುಂದಾಗಿರುವ ಚಿಂತಾಮಣಿ ಕೃಷಿಕ ರೈತರು
ರೈತರು ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟ ಹಾಗೂ ತಾಜಾ ಮಾಂಸವನ್ನು ನೀಡಬೇಕೆಂಬ ಸದ್ದುದೇಶದಿಂದ ಹದಿನೈದು ಜನ ರೈತರು ಒಗ್ಗಟ್ಟಾಗಿ ಚಿಂತಾಮಣಿ ತಾಲೂಕು ಮಾಡಿಕೆರೆ ಕ್ರಾಸ್ ನಲ್ಲಿ ಚಿಂತಾಮಣಿ ಕೃಷಿಕ ಉತ್ಪಾದಕ ಸಂಸ್ಥೆಯನ್ನು ಆರಂಭಿಸಿ ರೈತರೇ ತಮ್ಮ ಪಾರ್ಮ್ ಗಳಲ್ಲಿ ಉತ್ಕೃಷ್ಟ ಹಾಗೂ ಉತ್ತಮ ಗುಣಮಟ್ಟವಾದ ಚಿಂತಾಮಣಿ ಪೀಡ್ ನ್ನು ಬಳಸಿ ತಮ್ಮ ಪಾರ್ಮ್ ಗಳಲ್ಲಿ ಬೆಳೆಸಿರುವ ಕುರಿಪಟ್ಲಿಗಳನ್ನು ಕ್ಯೊಯ್ದು ಗುಡ್ಡೇ ಮಾಂಸವನ್ನು ಮಾರಾಟ ಮಾಡುವುದರ ಮೂಲಕ ರೈತರ ಮಕ್ಕಳು ಯಾವುದಕ್ಕೂ ಕಮ್ಮಿ ಇಲ್ಲ ಎಂದು ತೋರಿಸಲು ಮುಂದಾಗಿದ್ದಾರೆ.ಗುಡ್ಡೆ ಮಾಂಸಕ್ಕೆ ಪ್ರತಿನಿತ್ಯ ಬೇಡಿಕೆ ಹೆಚ್ಚಾಗುತ್ತಿದ್ದು, ಗ್ರಾಹಕರಿಗೆ ಮತ್ತಷ್ಟು ಉತ್ತಮ ಗುಣಮಟ್ಟದ ಮಾಂಸವನ್ನು ನೀಡಲು ಚಿಂತಾಮಣಿ ಕೃಷಿಕ ಉತ್ಪಾದಕ ಸಂಸ್ಥೆ ಮುಂದಾಗಿ ಮಾಂಸ ಕಟ್ಟಿಗ