ಹುಮ್ನಾಬಾದ್: ನವರಾತ್ರಿ ತುಳಜಾಪುರ ಜಾತ್ರೆ ವಿಶೇಷ ಬಸ್ ಸಂಚಾರದಿಂದ ಈ ಬಾರಿ ₹3ಕೋಟಿ ಆದಾಯ ಗುರಿ : ನಗರದಲ್ಲಿ ಕೆಕೆಆರ್ಟಿಸಿ ಡಿ.ಸಿ ರಾಜೇಂದ್ರ ಜಾಧವ್
Homnabad, Bidar | Sep 16, 2025 ನವರಾತ್ರಿ ಹಿನ್ನೆಲೆಯಲ್ಲಿ ಪಕ್ಕದ ಮಹಾರಾಷ್ಟ್ರದ ತುಜಾಪುರದ ಅಂಬ ಭವಾನಿ ಜಾತ್ರಾ ಹಿನ್ನೆಲೆಯಲ್ಲಿ ಇಂದು ಆರಂಭಿಸಲಾದ ವಿಶೇಷ ಬಸ್ ಸೇವೆಯಿಂದ ಈ ಬಾರಿ ₹3ಕೋಟಿ ಆದಾಯದ ಗುರಿ ಹೊಂದಲಾಗಿದೆ ಎಂದು ಕೆಕೆಆರ್‌ಟಿಸಿ ನಿಯಂತ್ರಣ ಅಧಿಕಾರಿ ರಾಜೇಂದ್ರ ಜಾದವ್ ತಿಳಿಸಿದರು. ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಂಗಳವಾರ ಬೆಳಿಗ್ಗೆ 10:30 ಕ್ಕೆ ತುಳಜಾಪುರ ಯಾತ್ರೆ ಬಸ್ ಸೇವೆಗೆ ಪೂಜಿಸಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು, ಡಿ ಟಿಓ ಇಂದ ಬಿರಾದಾರ ಇದ್ದರು.