ಬೆಂಗಳೂರು ದಕ್ಷಿಣ: ನಗರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ರಾಮಲಿಂಗಾರೆಡ್ಡಿ
ಸಾರಿಗೆ ಹಾಗೂ ಮುಜರಾಯಿ ಸಚಿವರು ಹಾಗೂ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಮಲಿಂಗಾರೆಡ್ಡಿ ರವರು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯನ್ನು ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆಸಿದರು. ಬಿ.ಟಿ.ಎಂ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ 2024-25ನೇ ಸಾಲಿನ ಅನುಮೋದಿತ ರೂ.27 ಕೋಟಿಗಳ ಪಿ.ಓ.ಡಬ್ಲ್ಯೂ. ಕಾಮಗಾರಿಗಳ ಪೈಕಿ ಕೆಲವೊಂದು ಇನ್ನೂ ಪ್ರಾರಂಭ ಆಗಿರುವುದಿಲ್ಲ ಅವುಗಳು ಪ್ರಾರಂಭ ಮಾಡಬೇಕು. ಈ ಪೈಕಿ ಜೆ. ಡಿ. ಮರ ಸ್ಲಂ, ಎನ್.ಎಸ್ ಪಾಳ್ಯ ವಾರ್ಡ್ ನ ಅಂಗನವಾಡಿ ಕಟ್ಟಡ ಕಾಮಗಾರಿ ಕೂಡಲೇ ಪ್ರಾರಂಭಿಸಲು ಸೂಚಿಸಿದರು.