ಆಳಂದ: ಊಡುಗಿ ಗ್ರಾಮ ಬಳಿಕ ಆಳಂದ ಪಟ್ಟಣದಲ್ಲೂ ವಿವಾದಿತ 'ಐ ಲವ್ ಮೊಹಮ್ಮದ್' ಬ್ಯಾನರ್
ಕಲಬುರಗಿ : ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಊಡುಗಿ ಗ್ರಾಮದಲ್ಲಿ ವಿವಾದಿತ 'ಐ ಲವ್ ಮೊಹಮ್ಮದ್' ಬ್ಯಾನರ್ ಬಳಿಕ ಆಳಂದ ಪಟ್ಟಣದಲ್ಲಿ ಸಹ ವಿವಾದಿತ 'ಐ ಲವ್ ಮೊಹಮ್ಮದ್' ಬ್ಯಾನರ್ ಅಳವಡಿಸಲಾಗಿದೆ.. ಅಕ್ಟೋಬರ್ 4 ರಂದು ಬೆಳಗ್ಗೆ 9 ಗಂಟೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.. ಪಟ್ಟಣದ ಲಾಡ್ಲೇ ಮಶಾಕ್ ದರ್ಗಾ ಉರುಸ್ ಹಿನ್ನಲೆಯಲ್ಲಿ ರಸ್ತೆ ಮಧ್ಯೆ 'ಐ ಲವ್ ಮೊಹಮ್ಮದ್' ಬ್ಯಾನರ್ ಆಳವಡಿಸಿದ್ದರು.. ಸದ್ಯ ವಿವಾದಿತ ಬ್ಯಾನರ್ನ್ನ ಆಳಂದ ಠಾಣೆ ಪೊಲೀಸರು ತೆರವು ಮಾಡಿದ್ದಾರೆ