ಲಿಂಗಸೂರು: ರಥೋತ್ಸವಕ್ಕೆ 2ಲಕ್ಷ ದೇಣಿಗೆ, ಭಾವೈಕ್ಯತೆಗೆ ಸಾಕ್ಷಿಯಾದ ಮುಸ್ಲಿಂ ಸಮುದಾಯ
ತಾಲ್ಲೂಕಿನ ಕಸಬಾಲಿಂಗಸುಗೂರು ಗ್ರಾಮದ ಕುಪ್ಪಿಭೀಮ ದೇವರ ರಥೋತ್ಸವಕ್ಕೆ ಮುಸ್ಲಿಂ ಸಮುದಾಯದಿಂದ ಎರಡು ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ. ಕುಪ್ಪಿಭೀಮ ದೇವರ ರಥೋತ್ಸವಕ್ಕೆ 100 ವರ್ಷ ತುಂಬಿದ್ದರಿಂದ ಡಿಸೆಂಬರ್ನಲ್ಲಿ ನಡೆಯುವ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲು ಗ್ರಾಮದ ಮುಖಂಡರು ತೀರ್ಮಾನಿಸಿದ್ದರಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ. ನಮ್ಮದು ಒಂದು ಸೇವೆ ಇರಲಿ ಎಂದು ಗ್ರಾಮದ ಮುಸ್ಲಿಂ ಸಮುದಾಯದ ಮುಖಂಡರು ಒಗ್ಗೂಡಿಸಿಕೊಂಡು ಎರಡು ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿ ದೇವಸ್ಥಾನದ ಸಮಿತಿಗೆ ನೀಡಿದ್ದಾರೆ.