ಚಿತ್ರದುರ್ಗ: ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಗಣಿಬಾಧಿತ ಹೋರಾಟ ಸಮಿತಿಯಿಂದ ಮಾಧ್ಯಮ ಸಂವಾದ
ಚಿತ್ರದುರ್ಗದ ಕಾವಡಿಗರಹಟ್ಟಿಯಲ್ಲಿ ಕಲುಷಿತ ನೀರು ಸಮಸ್ಯೆಯಿಂದಾಗಿ ನೂರಾರು ಮಂದಿ ಆಸ್ಪತ್ರೆ ಸೇರಿದ್ದರು, 6 ಮಂದಿ ಮೃತಪಟ್ಟಿದ್ದರು. ಅದು ಒಂದು ರೀತಿ ಪರಿಸರ ಸ್ವಚ್ಛತೆ ಇಲ್ಲದ ಕಾರಣದಿಂದ ಘಟನೆ ಸಂಭವಿಸಿತು ಎಂದು ನಟ ಅಹಿಂಸಾ ಚೇತನ್ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಗಣಿಬಾಧಿತ ಹೋರಾಟ ಸಮಿತಿಯಿಂದ ಆಯೋಜಿಸಿದ್ದ ಗಣಿಬಾಧಿತ ಪ್ರದೇಶಗಳ ಜನರ ಸಂಕಷ್ಟಗಳು, ಪರಿಸರ ಅಸಮತೋಲನ ಮತ್ತು ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿಯಲ್ಲಿ ಗಣಿಗಳ ಮಹತ್ವ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾವಾಡಿಗರಹಟ್ಟಿ ದುರ್ಘಟನೆ ಬಗ್ಗೆ ಪ್ರಸ್ತಾಪ ಮಾಡಿದರು. ಇನ್ನು ಸಿದ್ದರಾಮಯ್ಯ ಅವರು ಶಪಥ ಮಾಡಿ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದರು ಎಂದರು.