ಜೇವರ್ಗಿ: ಜೇವರ್ಗಿ ಪಟ್ಟಣದ ಬಳಿ ಭೀಕರ ರಸ್ತೆ ಅಪಘಾತ; ಎಂಟು ಜನರಿಗೆ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ
ಕಲಬುರಗಿ : ಜಾವಳ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ವಾಪಾಸು ಆಗ್ತಿದ್ದ ಕ್ರೂಸರ್‌ಗೆ ಟೆಂಟ್‌ಹೌಸ್ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಕ್ರೂಸರ್ ಪಲ್ಟಿಯಾಗಿ ಎಂಟು ಜನ ಗಾಯಗೊಂಡಿರೋ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ಪಟ್ಟಣ ಹೊರವಲಯದ ಸಿಂದಗಿ ಬೈಪಾಸ್ ರಸ್ತೆಯಲ್ಲಿ ನ11 ರಂದು ಸಂಜೆ 4 ಗಂಟೆಗೆ ನಡೆದಿದೆ.. ಘತ್ತರಗಿ ಭಾಗಮ್ಮ ದೇವಸ್ಥಾನದಿಂದ ವಾಪಾಸು ಆಗ್ತಿದ್ದ ಕ್ರೂಸರಗೆ ಟೆಂಟ್‌ಹೌಸ್ ಟೆಂಪೋ ಡಿಕ್ಕಿ ಹೊಡೆದಿದ್ದು, ಈ ವೇಳೆ ಕ್ರೂಸರ್ ಪಲ್ಟಿಯಾಗಿ ಎಂಟು ಜನ ಗಾಯಗೊಂಡು ಇಬ್ಬರ ಸ್ಥಿತಿ ಗಂಭೀರವಾಗಿದೆ.. ಇನ್ನೂ ಗಾಯಾಳುಗಳನ್ನ ಕಲಬುರಗಿ ಶಿಫ್ಟ್ ಮಾಡಲಾಗಿದ್ದು, ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ