ಮಳವಳ್ಳಿ: ಗೊಲ್ಲರಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ
ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿಯ ಗೊಲ್ಲರಹಳ್ಳಿ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಜರುಗಿತು. ಸಭೆಯಲ್ಲಿ ಮನ್ಮುಲ್ ನಿರ್ದೇಶಕ ಕೃಷ್ಣೆಗೌಡ ಅವರು ಮಾತನಾಡಿ, ನಮ್ಮ ಹಾಲು ಉತ್ಪಾದಕರಿಗೆ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ ಆಗದಂತೆ ಸರಿಯಾದ ಸಮಯಕ್ಕೆ ಫೀಡ್ಸ್ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು. ಈಗ ನಿಮ್ಮ ಗ್ರಾಮದಲ್ಲಿ ಹೆಚ್ಚು ಹಾಲು ಶೇಖರಣೆಯಾಗುತ್ತಿರುವುದರಿಂದ 3000 ಲೀಟರ್ ಸಾಮಥ್ರ್ಯ ಇರುವ ಕ್ಯಾಂಟರಿಗೆ ಬದಲಾಗಿ 5000 ಲೀಟರ್ ಸಾಮಥ್ರ್ಯ ಇರುವ ಕ್ಯಾಂಟರ್ ಕೊಡಿಸುವ ಭರವಸೆ ನೀಡಿದರು. ನಿಮ್ಮ ಈ ಹಾಲಿನ ಡೈರಿಗೆ ಈ ವರ್ಷ 20,83,000 ನಿವ್ವಳ ಲಾಭ ಬಂದಿದ್ದು ,ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹಾಲು ಸರಬರಾಜ