ಚಾಮರಾಜನಗರ: ಅಂಗಡಿ ಮಾಲೀಕನ ಮೇಲೆ ಹಲ್ಲೆ ಪ್ರಕರಣ ದೂರು ಕೊಟ್ಟರೆ ಪ್ರಕರಣ ದಾಖಲು ಮಾಡುತ್ತೇವೆ : ನಗರದಲ್ಲಿ ಎಸ್ಪಿ ಡಾ.ಬಿ.ಟಿ.ಕವಿತಾ
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮಾತನಾಡಿ ಚಾಮರಾಜನಗರ ಜಿಲ್ಲಾ ಬಂದ್ ಸಂದರ್ಭದಲ್ಲಿ ಅಂಗಡಿ ಮಾಲೀಕನ ಮೇಲೆ ಮಾಡಿರುವ ಹಲ್ಲೆ ವೀಡಿಯೋ ವೈರಲ್ ಆಗಿದೆ. ಈ ಪ್ರಕರಣ ಸಂಬಂಧ ಅಂಗಡಿ ಮಾಲೀಕ ಪಟ್ಟಣ ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ ನಾವು ದೂರನ್ನು ದಾಖಲಿಸುವ ಮಧ್ಯದಲ್ಲೇ ನಮಗೆ ದೂರು ಬೇಡ ಎಂದು ದೂರನ್ನು ಹಿಂಪಡೆದಿದ್ದಾರೆ ನಾವು ಕೂಡ ಒಂದು ವೀಡಿಯೋ ಸ್ಟೇಟ್ ಮೆಂಟ್ಸ್ ಕೂಡ ಪಡೆದಿದ್ದೇವೆ ಮತ್ತೇ ದೂರು ಕೊಟ್ಟರೆ ನಾವು ಪಡೆಯುತ್ತೇವೆ ಎಂದು ತಿಳಿಸಿದರು