ಮೈಸೂರು: ದಸರಾ ಪೊಲೀಸ್ ಬಂದೋಬಸ್ತ್ ವಿಚಾರವಾಗಿ ಪೋಲಿಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಡಿಜಿ ಮತ್ತು ಐಜಿಪಿ ಎಂ ಎ ಸಲೀಂ
Mysuru, Mysuru | Sep 17, 2025 ಮೈಸೂರು ದಸರಾ-2025ರ ಆಚರಣೆ ಸಂಬಂಧ ಇಂದು ರಾಜ್ಯ ಪೊಲೀಸ್ ಇಲಾಖೆಯ ಮುಖ್ಯಸ್ಥರಾದ ಡಾ. ಎಂ. ಎ. ಸಲೀಂ, IPS, ಡಿಜಿ & ಐಜಿಪಿ ಕರ್ನಾಟಕ ರಾಜ್ಯ ರವರು ಮೈಸೂರು ನಗರ ಪೊಲೀಸ್ ಆಯುಕ್ತರ ಕಛೇರಿಗೆ ಭೇಟಿ ನೀಡಿ ದಸರಾ ಬಂದೋಬಸ್ತ್ ಯೋಜನೆಯ ಪೂರ್ವ ತಯಾರಿ ಬಗ್ಗೆ ಪರಮರ್ಶನ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಮೈಸೂರು ನಗರದ ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್ IPS ರವರು, ಉಪ ಪೊಲೀಸ್ ಆಯುಕ್ತರುಗಳಾದ ಕುಮಾರಿ ಬಿಂದುಮಣಿ IPS, ಕಾನೂನು & ಸುವ್ಯವಸ್ಥೆ, ಶ್ರೀ ಸುಂದರ್ ರಾಜ್ ಕೆ.ಎಸ್. ಅಪರಾಧ & ಸಂಚಾರ ರವರು & ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.