ಚಿಕ್ಕನಾಯಕನಹಳ್ಳಿ: ಸೇವೆ ನೀಡದೆ ಸುಂಕ ವಸೂಲು ಮಾಡುವ ಹುಳಿಯಾರು ಪಟ್ಟಣ ಪಂಚಾಯಿತಿ ವಿರುದ್ದ ಮತ್ತೆ ಅಹೋರಾತ್ರಿ ಧರಣಿ : ಪಟ್ಟಣದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ
ಹುಳಿಯಾರು ಪಟ್ಟಣ ಪಂಚಾಯಿತಿಯು ಸೇವೆ ನೀಡದೆ ಸುಂಕ ವಸೂಲು ಮಾಡುತ್ತಿರುವ ವಿರುದ್ದ ಮತ್ತೆ ಅಹೋರಾತ್ರಿ ಧರಣಿ ನಡೆಸಲಿದ್ದೇವೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಹೇಳಿದರು. ಅವರು ಹುಳಿಯಾರು ಪಟ್ಟಣ ಪಂಚಾಯಿತಿ ಕಚೇರಿ ಎದುರು ಮಾಧ್ಯಮಗೋಷ್ಠಿ ಉದ್ದೇಶಿಸಿ ಗುರುವಾರ ಮಧ್ಯಾಹ್ನ ಸುಮಾರು 12 ರ ಸಮಯದಲ್ಲಿ ಮಾತನಾಡಿದರು. ಸಂತೆ ಸ್ಥಳಾಂತರ ಮಾಡಿ ಅಲ್ಲಿ ಕುಡಿಯುವ ನೀರು ಶೌಚಾಲಯ ಸೇರಿದಂತೆ ಇತರ ಸೌಲಭ್ಯ ನೀಡಬೇಕು. ಅಲ್ಲಿಯವರೆಗೆ ನಾವು ಸೇವಾ ಶುಲ್ಕವನ್ನು ಕಟ್ಟುವುದಿಲ್ಲ ಏಕೆಂದರೆ ನೀವು ಸೇವೆನೆ ಮಾಡ್ತೀಲ್ಲ ಸುಂಕ ಏಕೆ ಕಟ್ಟಬೇಕು ಎಂದರು. ಪಟ್ಟಣ ಪಂಚಾಯಿತಿ ದುರಾಡಳಿತ ವಿರುದ್ದ ಮತ್ತೆ ಪ್ರತಿಭಟನೆ ಬಿಟ್ಟರೆ ನಮಗೆ ಅನ್ನ ಮಾರ್ಗವಿಲ್ಲ ಎಂದರು.