ಹಾಸನ: ಹಾಸನಾಂಬ ಉತ್ಸವದ ಲೋಪಗಳನ್ನು ಸರಿಪಡಿಸಲು ಜಿಲ್ಲಾಡಳಿತಕ್ಕೆ ಮನವಿ: ನಗರದಲ್ಲಿ ರಾಷ್ಟ್ರ ರಕ್ಷಣಾ ಸೇನೆಯ ರಾಜ್ಯ ಸಂಚಾಲಕ ಸುರೇಶ್ ಗೌಡ
Hassan, Hassan | Oct 6, 2025 ಹಾಸನ: ಹಾಸನಾಂಬ ಉತ್ಸವದಲ್ಲಿ ನಡೆಯುತ್ತಿರುವ ಹಲವು ಲೋಪಗಳನ್ನು ಸರಿಪಡಿಸುವ ಸಲುವಾಗಿ ಜಿಲ್ಲಾಡಳಿತಕ್ಕೆ ಇಂದು ಮನವಿ ಸಲ್ಲಿಸಲಾಗುತ್ತಿದೆ ಎಂದು ರಾಷ್ಟ್ರ ರಕ್ಷಣಾ ಸೇನೆಯ ರಾಜ್ಯ ಸಂಚಾಲಕ ಸುರೇಶ್ ಗೌಡ ಹೇಳಿದರು.ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷ ಹಾಸನಾಂಬ ಉತ್ಸವದಲ್ಲಿ ಹಲವು ಸಮಸ್ಯೆಗಳಾಗುತ್ತವೆ ಅವುಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮವಹಿಸಬೇಕೆಂದು ಮನವಿ ಮಾಡಿದ ಅವರು, ಉತ್ಸವದ ಹಲವು ದಿನಗಳ ಮೊದಲೇ ಜನ ಓಡಾಡುವ ರಸ್ತೆಗಳಲ್ಲಿ ಸ್ಥಳೀಯ ನಿವಾಸಿಗಳಿಗೆ ತೊಂದರೆ ಕೊಡಲಾಗುತ್ತಿದೆ ಅಲ್ಲದೆ ಇದರಿಂದ ವ್ಯಾಪಾರ ವಹಿವಾಟುಗಳಿಗೂ ತೊಂದರೆಯಾಗುತ್ತಿದೆ ಎಂದರು