ಕಲಬುರಗಿ: ಟನ್ ಕಬ್ಬಿಗೆ ₹3300 ದರ ನಿಗದಿ ಸ್ವಾಗತಾರ್ಹ: ನಗರದಲ್ಲಿ ರೈತ ಮುಖಂಡ ಚಂದ್ರಶೇಖರ ಹಿರೇಮಠ್
ಕಲಬುರಗಿ : ಟನ್ ಕಬ್ಬಿಗೆ ₹3300 ರೂ ನಿಗದಿ ಮಾಡಿರೋ ರಾಜ್ಯ ಸರ್ಕಾರದ ಕ್ರಮಕ್ಕೆ ನಾವು ಸ್ವಾಗತಾರ್ಹ ಮಾಡುತ್ತೇವೆಂದು ಹಿರಿಯ ರೈತ ಮುಖಂಡ ಚಂದ್ರಶೇಖರ ಹಿರೇಮಠ ಹೇಳಿದ್ದಾರೆ.. ನ8 ರಂದು ಬೆಳಗ್ಗೆ 10.30 ಕ್ಕೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿರೋ ಸಕ್ಕರೆ ಕಾರ್ಖಾನೆಗಳು ರೈತರಿಗೆ ನಿರಂತರ ಮೋಸ ಮಾಡುತ್ತ ಬಂದಿವೆ.. ಹೀಗಾಗಿ ಸರ್ಕಾರದ ನಿರ್ಣಯದಂತೆ ಜಿಲ್ಲೆಯ ರೈತರಿಗೆ ಟನ್ ಕಬ್ಬಿಗೆ ₹3300 ಸಿಗೋ ಹಾಗೇ ನೋಡಿಕೊಳ್ಳಬೇಕೆಂದು ಚಂದ್ರಶೇಖರ ಹಿರೇಮಠ ಆಗ್ರಹಿಸಿದ್ದಾರೆ..