ಗುಂಡ್ಲುಪೇಟೆ: ಬರಗಿ ಗ್ರಾಮದಲ್ಲಿ ಕರಡಿ ಓಡಾಟ- ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ ರಾತ್ರಿ ವೇಳೆ ಕರಡಿ ಓಡಾಡಿದ್ದು ಸಿಸಿಟಿವಿ ಹಾಗೂ ಮೊಬೈಲ್ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಬರಗಿ ಗ್ರಾಮದ ಬೀದಿಗಳಲ್ಲಿ ಒಂಟಿ ಕರಡಿಯೊಂದು ಓಡಾಡಿದ್ದು ಬೀದಿನಾಯಿಗಳು ಬೊಗಳುವ ಶಬ್ಧ ಕೇಳಿ ಕರಡಿ ಬಂದಿರುವ ವಿಚಾರ ಗೊತ್ತಾಗಿದೆ. ಗ್ರಾಮದ ಬೀದಿಗಳಲ್ಲೇ ಕರಡಿ ಓಡಾಡಿರುವುದು ಸದ್ಯ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.