ಸಿಂಧನೂರು ರೈಲು ನಿಲ್ದಾಣದಿಂದ ಗಂಗಾವತಿ ಮಾರ್ಗವಾಗಿ ಹುಬ್ಬಳ್ಳಿಗೆ ಡೆಮೋ ಪ್ಯಾಸೆಂಜರ್ ರೈಲನ್ನ ಓಡಿಸಲಾಗುತ್ತಿದ್ದು, ನಿತ್ಯ ಸಾವಿರಾರು ಪ್ರಯಾಣಿಕರು ಈ ಒಂದು ರೈಲಿನಲ್ಲಿ ಓಡಾಡುತ್ತಾರೆ. ಆದರೆ ರೈಲಿನಲ್ಲಿ ಒಂದು ಶೌಚಾಲಯ ಇಲ್ಲ ಎಂದು ಪ್ರಯಾಣಿಕರು ಸಾಕಷ್ಟು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಸಂಬಂಧಪಟ್ಟ ರೈಲ್ವೆ ಸಚಿವರು ಮುಖ್ಯಮಂತ್ರಿಗಳು, ಸಂಸದರು ಇತ್ತ ಗಮನಹರಿಸಿ ಪ್ರಯಾಣಿಕರಿಗೆ ಸುಮಗ ಸಂಚಾರಕ್ಕೆ ಶೌಚಾಲಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ.