ಶಿಕಾರಿಪುರ: ಶಿಕಾರಿಪುರ ಬಂದ್ ಹಿನ್ನೆಲೆ ಕುಟ್ರಳ್ಳಿ ಟೋಲ್ ಗೇಟ್ ಬಳಿ ನಿಷೇಧಾಗ್ನಿಜಾರಿ
ಅವೈಜ್ಞಾನಿಕ ಟೋಲ್ ಗೇಟ್ ವಿರೋಧಿಸಿ ಶಿಕಾರಿಪುರ ಬಂದ್ ಕರೆ ನೀಡಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಕುಟ್ರಳ್ಳಿ ಟೋಲ್ ಗೇಟ್ ಬಳಿ ಜನರ ಗುಂಪು ಸೇರುವುದನ್ನ ನಿಷೇಧಿಸಲಾಗಿದೆ.ಗುರುವಾರ ಟೋಲ್ ಗೇಟ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ವಿರೋಧಿ ಹೋರಾಟ ಸಮಿತಿ ಶಿಕಾರಿಪುರ ಬಂದ್ ಗೆ ಕರೆ ನೀಡಿದ್ದು, ಶಿಕಾರಿಪುರ-ಶಿರಾಳಕೊಪ್ಪ ನಡುವಿನ ರಾಜ್ಯ ಹೆದ್ದಾರಿಯ ಕುಟ್ರಳ್ಳಿ ಟೋಲ್ ಗೆ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.