ಮೊಳಕಾಲ್ಮುರು: ನಾಯಕನಹಟ್ಟಿ ಬೆಸ್ಕಾಂ ಕಚೇರಿಯಲ್ಲಿ ದಸರಾ ಹಬ್ಬದ ಆಯುಧ ಪೂಜೆಯ ಸಡಗರ
ಚಳ್ಳಕೆರೆ:-ಭಾರತೀಯ ಸಂಸ್ಕೃತಿಯಂತೆ ಪ್ರತಿ ವರ್ಷ ಆಯ್ದ ಪೂಜೆ ಆಚರಣೆ ಮಾಡುವುದು ಸಂಪ್ರದಾಯವಾಗಿದೆ ಎಂದು ನಾಯಕನಹಟ್ಟಿ ಪಟ್ಟಣದ ಬೆಸ್ಕಾಂ ಕಚೇರಿಯ ಶಾಖಾಧಿಕಾರಿ ಎನ್ ಬಿ ಬೋರಣ್ಣ ಹೇಳಿದರು. ಬುಧವಾರ ಬೆಳಿಗ್ಗೆ 11:55ಕ್ಕೆ ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ವಿಜಯದಶಮಿ ಆಯುಧ ಪೂಜೆ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು. ನಾಯಕನಹಟ್ಟಿ ಬೆಸ್ಕಾಂ ಕಚೇರಿಯಲ್ಲಿ ಪ್ರತಿವರ್ಷದಂತೆ ವಿಜಯದಶಮಿ ಆಯುಧ ಪೂಜೆಯನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತದೆ ನಾಡಿನ ಸಮಸ್ತ ಜನತೆಗೆ ಉತ್ತಮ ಮಳೆ ಬೆಳೆ ಸಮೃದ್ಧಿಯಾಗಲಿ ಎಂದರು.