ಕೊಳ್ಳೇಗಾಲ: ಮಾಂಬಳ್ಳಿಯಲ್ಲಿ ಬೈಕ್ ಗೆ ಗೂಡ್ಸ್ ವಾಹನ ಡಿಕ್ಕಿ: ಸವಾರನಿಗೆ ಗಂಭೀರ ಪೆಟ್ಟು
ಕೋಳೇಗಾಲ ತಾಲ್ಲೂಕಿನ ಮಾಂಬಳ್ಳಿ ಗ್ರಾಮದ ಸಮೀಪ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. ತಾಳವಾಡಿ ಸಮೀಪದ ಇಗ್ಗಲ್ಲೂರ ಗ್ರಾಮದ ನಿವಾಸಿ ಮನೋಜ್ ಎಂಬವರು ಗಾಯಗೊಂಡ ವ್ಯಕ್ತಿಯಾಗಿದ್ದಾರೆ ಮಾಂಬಳ್ಲಿ ಸಮೀಪ ಬೈಕ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ,ಫೋನ್‌ನಲ್ಲಿ ಮಾತನಾಡುತ್ತಿದ್ದ ಸಮಯದಲ್ಲಿ, ಕೇರಳದಿಂದ ಬೆಂಗಳೂರು ಕಡೆಗೆ ವೇಗವಾಗಿ ಸಾಗುತ್ತಿದ್ದ ಗೂಡ್ಸ್ ವಾಹನವು ಅಜಾಗರೂಕತೆಯಿಂದ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಬೈಕ್ ಸವಾರನ ಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ.ಘಟನೆಯ ನಂತರ ಗಾಯಾಳುವನ್ನು ತಕ್ಷಣವೇ ಆಸ್ಪತ್ರೆಗೆ ಕರೆತರಲಾಗಿದೆ