ಕೊಳ್ಳೇಗಾಲ: ಮಾದಿಗ ಒಳ ಮೀಸಲಾತಿ ವಿಚಾರದಲ್ಲಿ ರಾಜಕೀಯ ಮಿಶ್ರಣ ಬೇಡ: ನಗರಸಭೆ ಅಧ್ಯಕ್ಷೆ ರೇಖಾ ರಮೇಶ್
ಹನೂರು: ಮಾದಿಗ ಸಮುದಾಯದ ಒಳ ಮೀಸಲಾತಿ ವಿಚಾರದಲ್ಲಿಸಚಿವ ಹೆಚ್ ಸಿ ಮಹದೇವಪ್ಪ ಅವರ ವಿರುದ್ಧ ಕೆಲವರು ರಾಜಕೀಯ ಬೆರೆಸಿ ಮಾತನಾಡುತ್ತಿರುವುದು ತಪ್ಪು ಎಂದು ಕೊಳ್ಳೇಗಾಲ ನಗರಸಭೆಯ ಅಧ್ಯಕ್ಷೆ ರೇಖಾ ರಮೇಶ್ ಹೇಳಿದ್ದಾರೆ ಕೊಳ್ಳೇಗಾಲ ನಗರಸಭೆ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಮಾದಿಗ ಸಮುದಾಯದ ಒಳ ಮೀಸಲಾತಿಗೆ ಮಹದೇವಪ್ಪ ಅವರು ನಿಷ್ಠೆಯಿಂದ ಶ್ರಮಿಸಿದ್ದಾರೆ. ಈ ಹೋರಾಟದಲ್ಲಿ ರಾಜಕೀಯ ಲಾಭ ಪಡೆಯುವ ಉದ್ದೇಶವಿಲ್ಲ. ಇಂತಹ ನಿಷ್ಕಪಟ ಪ್ರಯತ್ನವನ್ನು ರಾಜಕೀಯ ಕಣ್ಣಿನಿಂದ ನೋಡುವುದು ದುರ್ದೈವ,” ಎಂದು ಅಭಿಪ್ರಾಯಪಟ್ಟರು. ಒಳ ಮೀಸಲಾತಿ ಮಾದಿಗ ಸಮುದಾಯದ ಹಕ್ಕು. ಅದನ್ನು ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಚಿಂತನೆ ಬೇಕು. ಸಮುದಾಯದ ಭವಿಷ್ಯಕ್ಕೆ ಕಾರಣರಾಗಿ ನಿಲ್ಲುವಂತಹ ನಾಯಕರಿಗೆ ಬೇರೆಯವರು ಟೀ