ತುಮಕೂರು: ದಸರಾ ಹಿನ್ನಲೆ ಸೆ. 22 ರಿಂದ ಅ 2ರವರೆಗೆ ಹೆಲಿಕಾಪ್ಟರ್ ರೈಡ್, ಹಾಟ್ ಏರ್ ಬಲೂನ್ ಸವಾರಿ : ನಗರದ ಜಿಪಂ ಕಚೇರಿಯಲ್ಲಿ ಬುಕಿಂಗ್ ಆರಂಭ
ತುಮಕೂರು ದಸರಾ-2025ರ ಅಂಗವಾಗಿ ಸೆಪ್ಟಂಬರ್ 22 ರಿಂದ ಅಕ್ಟೋಬರ್ 2ರವರೆಗೆ ಹೆಲಿಕಾಪ್ಟರ್ ರೈಡ್ ಮತ್ತು ಹಾಟ್ ಏರ್ ಬಲೂನ್ ಸವಾರಿ ಆಯೋಜಿಸಲಾಗಿದ್ದು, ಸವಾರಿ ಮಾಡಲಿಚ್ಛಿಸುವವರ ಅನುಕೂಲಕ್ಕಾಗಿ ತುಮಕೂರು ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಆಫ್ ಲೈನ್ ಬುಕಿಂಗ್ ಕೌಂಟರ್ ತೆರೆಯಲಾಗಿದೆ. ಹೆಲಿಕಾಪ್ಟರ್ ರೈಡ್ ದರವನ್ನು ಒಬ್ಬರಿಗೆ 3900 ರೂ. ಗಳನ್ನು ನಿಗದಿಪಡಿಸಲಾಗಿದೆ. ಹಾಟ್ ಏರ್ ಬೆಲೂನ್ ಸವಾರಿ ದರವನ್ನು ವಯಸ್ಕರಿಗೆ 1000 ರೂ., ವಿದ್ಯಾರ್ಥಿಗಳಿಗೆ 750 ರೂ. ಹಾಗೂ 10ವರ್ಷದೊಳಗಿನ ಮಕ್ಕಳಿಗೆ 500 ರೂ. ಗಳನ್ನು ನಿಗದಿಪಡಿಸಲಾಗಿದೆ. ಆಸಕ್ತರು ತುಮಕೂರು ಜಿಲ್ಲಾ ಪಂಚಾಯತ್ ಆವರಣಕ್ಕೆ ಭೇಟಿ ನೀಡಿ ಬುಕಿಂಗ್ ಮಾಡಬಹುದು.