ತೀರ್ಥಹಳ್ಳಿ: ಸರ್ಕಾರ ಒಂದೊಂದು ದಿನ ಮುಂದುವರೆದರು ಈ ರಾಜ್ಯಕ್ಕೆ ಶಾಪ:ಆರಗದಲ್ಲಿ ಶಾಸಕ ಆರಗ ಜ್ಞಾನೇಂದ್ರ
ಸರ್ಕಾರ ಎಂಬುದು ಕೆಲಸ ಮಾಡುತ್ತಿಲ್ಲ. ಅದು ಸ್ಥಗಿತಗೊಂಡಿದೆ. ಅವರಲ್ಲೇ ಒಳ ಜಗಳ, ಅಧಿಕಾರಕ್ಕಾಗಿ ಕಚ್ಚಾಟ.ನಾನು ಶಾಶ್ವತ ಮುಖ್ಯಮಂತ್ರಿ ಅನ್ನುವುದು. ಎರಡುವರೆ ವರ್ಷಕ್ಕೆ ನನ್ನ ಪಾಲು ಬರಬೇಕು ಅಂತ ಉಪ ಮುಖ್ಯಮಂತ್ರಿ.ಎಲ್ಲಾ ಗದ್ದಲದಲ್ಲಿದೆ ಟ್ರೆಜುರಿಯಲ್ಲಿ ಹಣಕಾಸು ಇಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದ್ದಾರ. ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಸರ್ಕಾರ ಒಂದೊಂದು ದಿನ ಮುಂದುವರೆದರು ಕೂಡ ಈ ರಾಜ್ಯಕ್ಕೆ ಶಾಪ ಎಂದಿದ್ದಾರೆ.