ತುಮಕೂರು: ಸಾಮಾಜಿಕ,ಶೈಕ್ಷಣಿಕ ಸಮೀಕ್ಷೆ ವೇಳೆ ಹಿಂದೂ ಸಾದರ ಎಂದೇ ನಮೂದಿಸಿ : ನಗರದಲ್ಲಿ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ
ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗ ನಡೆಸಲಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ವೇಳೆ ಜಾತಿ ಕಾಲಂ ನಲ್ಲಿ ಹಿಂದೂ ಸಾದರ ಎಂದೇ ನಮೂದು ಮಾಡಬೇಕು ಎಂದು ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಡಿ. ಇ ರವಿಕುಮಾರ್ ಸಮುದಾಯದವರಿಗೆ ಕರೆ ಕೊಟ್ಟರು. ಅವರು ತುಮಕೂರು ನಗರದ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ಬಾಲಕರ ಉಚಿತ ವಿದ್ಯಾರ್ಥಿ ನಿಲಯದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಂಗಳವಾರ ಮಧ್ಯಾಹ್ನ 1.30 ರ ಸಮಯದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಸುಮಾರು 3 ಲಕ್ಷ ಹಿಂದೂ ಸಾದರ ಸಮುದಾಯದವರಿದ್ದಾರೆ. ತಮಿಳುನಾಡು ಕೃಷ್ಣ ಗಿರಿ ಹಾಗೂ ಆಂಧ್ರದ ಪೆನ್ನುಗೊಂಡದಲ್ಲಿಯು ಹಿಂದೂ ಸಾದರ ಸಮುದಾಯದವರಿದ್ದಾರೆ ಎಂದರು.