ಶಹಾಬಾದ: ಮರತೂರು ಬಳಿ ಹಾಸನ-ಸೋಲಾಪುರ ರೈಲಿನಲ್ಲಿ ಕಾಣಿಸಿಕೊಂಡ ದಟ್ಟ ಹೊಗೆ: ಬೆಚ್ಚಿಬಿದ್ದ ಪ್ರಯಾಣಿಕರು
ಕಲಬುರಗಿ : ಹಾಸನ ಸೋಲಾಪುರ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲಿನ ನಾಲ್ಕನೇ ಬೋಗಿಯಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡ ಘಟನೆ ಕಲಬುರಗಿ ಜಿಲ್ಲೆ ಶಹಬಾದ್ ತಾಲೂಕಿನ ಮರತೂರು ಗ್ರಾಮದ ಬಳಿ ಜು21 ರಂದು 5.45 ಗಂಟೆಗೆ ಸಂಭವಿಸಿದೆ.. ರೈಲು ಸಂಖ್ಯೆ 11312 ಹಾಸನ-ಸೋಲಾಪುರ ರೈಲು ಮರತೂರು ಬಳಿ ಬರ್ತಿದ್ದಂಗೆ ನಾಲ್ಕನೇ ಬೋಗಿಯ ಬ್ರೇಕ್ ಬೈಂಡಿಂಗ್ನಲ್ಲಿ ತಾಂತ್ರಿಕ ದೋಷದಿಂದ ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದು, ಮರತೂರು ರೈಲ್ವೆ ಸಿಬ್ಬಂದಿ ಗಮನಿಸಿ ರೆಡ್ ಸಿಗ್ನಲ್ ನೀಡಿ ರೈಲು ನಿಲ್ಲಿಸಿದ್ದಾರೆ.