ಮಳವಳ್ಳಿ : ತಾಲೂಕಿನ ತಮ್ಮಡಹಳ್ಳಿ ಗ್ರಾಮದ ಶ್ರೀ ಪಟ್ಟಲ ದಮ್ಮ ದೇವಿ ದೇವಸ್ಥಾನದ ಮೊದಲನೇ ವರ್ಷದ ಮಹೋತ್ಸ ವವು ಶನಿವಾರ ಸಂಜೆ ವಿಜೃಂಭಣೆ ಯಿಂದ ಜರುಗಿತು. ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ಪೂಜಾ, ಅಭಿಷೇಕ ಮತ್ತು ಹೋಮ ಹವನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಸಂಜೆ 6. 30ರ ಸಮಯದಲ್ಲಿ ಪಟ್ಟಲದಮ್ಮ ದೇವಿಯ ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಹಳ್ಳಿಗಳ ಜನರು ಉತ್ಸವದಲ್ಲಿ ಪಾಲ್ಗೊಂಡು ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಭಕ್ತಿ ಸರ್ಮಪಿಸಿದರು