ಶೋರಾಪುರ: ಪೇಠ ಅಮ್ಮಾಪುರ ಬಳಿಯ ರಾಮಲಿಂಗೇಶ್ವರ ಮಠದಲ್ಲಿ ನವರಾತ್ರಿ ಅಂಗವಾಗಿ ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ
ಪೇಠ ಅಮ್ಮಾಪುರ ಜಾಲಿಬೆಂಚಿ ಗ್ರಾಮಗಳ ಮಾರ್ಗ ಮಧ್ಯದ ರಾಮಲಿಂಗೇಶ್ವರ ಆನಂದ್ ಆಶ್ರಮ ಮಠದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಮುತ್ತೈದೆಯರ ಪುಡಿ ತುಂಬುವ ಹಾಗೂ ಅನ್ನದಾಸೋಹ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಯಿತು. ಬುಧವಾರ ಬೆಳಗ್ಗೆ ನಡೆದ ಕಾರ್ಯಕ್ರಮದ ನೇತೃತ್ವವನ್ನು ಶ್ರೀಮಠದ ರಾಮ್ ಶರಣರು ವಹಿಸಿದ್ದರು. ಮೊದಲಿಗೆ ಅಂಬಾ ದೇವಿಯ ಪೂಜೆ ನಂತರ ಮುತ್ತೈದೆಯರ ಕುಡಿ ತುಂಬುವ ಕಾರ್ಯಕ್ರಮ ಹಾಗೂ ಅನ್ನದಾಸೋಹ ಕಾರ್ಯಕ್ರಮದಲ್ಲಿ ಪೇಟ ಅಮ್ಮಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಜನ ಭಕ್ತರು ಭಾಗವಹಿಸಿದ್ದರು.