ಚಾಮರಾಜನಗರ: ನಗರದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಬೃಹತ್ ಗಾತ್ರದ ಸೇಬು ಹಣ್ಣಿನ ಹಾರ ಹಾಕಿ ಸ್ವಾಗತಿಸಿದ ಅಭಿಮಾನಿಗಳು
ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಆರ್ಯ ಈಡಿಗ ಸಮಾಜದವರಿಂದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಬೃಹತ್ ಗಾತ್ರ ಸೇಬು ಹಣ್ಣಿನ ಹಾರ ಹಾಕಿ ಸ್ವಾಗತಿಸಿದರು. ಭುವನೇಶ್ವರಿ ವೃತ್ತದಿಂದ ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನದ ಡಾ.ರಾಜ್ ಕುಮಾರ್ ರಂಗಮಂದಿರ ತನಕ ಮೆರವಣಿಗೆ ಮೂಲಕ ಕರಿದ್ಯೊಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ರೇಣುಕಾನಂದ ಸ್ವಾಮೀಜಿಗಳು, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಹಾಗೂ ಇತರರು ಭಾಗವಹಿಸಿದ್ದರು