ಹೆಬ್ರಿ: ಹೆಬ್ರಿ ಠಾಣಾ ವ್ಯಾಪ್ತಿಯಲ್ಲಿ ಪಿಕಪ್ ವಾಹನ-ಟಿವಿಎಸ್ ಮೋಪೆಡ್ ನಡುವೆ ಡಿಕ್ಕಿ, ಸವಾರ ಸಾವು
Hebri, Udupi | Jun 19, 2025 ಚಾರ ತೆಂಕಬೆಟ್ಟು ಸೀತಾರಾಮ ಶೆಟ್ಟಿ 70 ವಯಸ್ಸಿನ ಇವರು ಟಿವಿಎಸ್ ಲುನಾದಲ್ಲಿ ಇಂದು ಮಧ್ಯಾಹ್ನ ಚಾರದಿಂದ ಹೆಬ್ರಿ ಕಡೆ ಬರುತ್ತಿರುವಾಗ ಲ್ಯಾಂಪ್ ಸೊಸೈಟಿ ಬಳಿ ಇವರಿಗೆ ಪಿಕಪ್ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟಿದ್ದಾರೆ . ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.