ಚಳ್ಳಕೆರೆಯಲ್ಲಿ ಮಾರ್ಕ್ ಸಿನಿಮಾಗೆ ಶಾಕ್ ನೀಡಿದ್ದು ದ್ವೇಷ ಪದಗಳಿಂದ ಕೂಡಿದ್ದ ಫ್ಲೆಕ್ಸ್ ಅನ್ನ ಪೊಲೀಸರು ತೆರವು ಮಾಡಿದ್ದಾರೆ. ಗುರುವಾರ ಮಧ್ಯಾಹ್ನ 3 ಗಂಟೆಗೆ ಘಟನೆ ನಡೆದಿದ್ದು ಕಿಚ್ಚನ ಅಭಿಮಾನಿಗಳಿಗೆ ಅಘಾತ ಉಂಟಾಗಿದೆ. ಚಳ್ಳಕೆರೆ ನಗರದಲ್ಲಿ ಕಿಚ್ಚನ ಸಾವಿರಾರು ಅಭಿಮಾನಿಗಳು ಮಾರ್ಕ್ ಸಿನಿಮಾ ಬಿಡುಗಡೆ ದಿನದಂದು ಸಾರ್ವಜನಿಕರಿಗೆ ಅನ್ನಸಂತರ್ಪಣೆ ಹಾಗೂ ಹಣ್ಣು ವಿತರಣೆ ಮಾಡಲು ಅಭಿಮಾನಿಗಳು ಉತ್ಸುಕರಾಗಿದ್ದರು. ಆದರೆ ಪೋಲೀಸರಿಂದ ಕಿಚ್ಚ ಅಭಿಮಾನಿಗಳಿಗೆ ನೋವುಂಟು ಮಾಡಿದೆ ಎನ್ನಲಾಗಿದೆ.