*ಅದ್ದೂರಿಯಾಗಿ ನಡೆದ ಗೌರಿ ಹಬ್ಬ* ಚಿತ್ರದುರ್ಗ:-ಗೌರಿ ಹುಣ್ಣಿಮೆ ಅಂದ್ರೆ ಹೆಣ್ಣು ಮಕ್ಕಳಿಗೆ ಸಂಭ್ರಮವೋ ಸಂಭ್ರಮ.ಗ್ರಾಮೀಣ ಪ್ರದೇಶದಲ್ಲಿಂತು ಹುಣ್ಣಿಮೆ ಸಂಭ್ರಮ,ಸಡಗರ ಮನೆ ಮನೆಗಳಲ್ಲಿ ತುಂಬಿರುತ್ತದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ಗುಂಡ್ಲುರು ಗ್ರಾಮದಲ್ಲಿ ಗೌರಿ ಹುಣ್ಣಿಮೆ ಆಚರಣೆ ಅದ್ದೂರಿಯಾಗಿ ಆಚರಿಸಲಾಯಿತು. ಹುಣ್ಣಿಮೆಯ ದಿನಕ್ಕೂ ಮೊದಲೇ ಗ್ರಾಮದ ಹೆಣ್ಣು ಮಕ್ಕಳು ದೇವಸ್ಥಾನಕ್ಕೆ ಬಂದು ಆರತಿ ಬೆಳಗಿದರು.