ಬಸವಕಲ್ಯಾಣ: ಮನೆ ಮುಂದೆ ಆಟವಾಡುತಿದ್ದ ಮೂರು ವರ್ಷದ ಬಾಲಕನ ಮೇಲೆ ಶಾಲಾ ವಾಹನ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಚೌಕಿವಾಡಿ ಗ್ರಾಮದಲ್ಲಿ ಜರುಗಿದೆ. ಶ್ರೀಹರಿ ಪಾಟೀಲ(3) ಘಟನೆಯಲ್ಲಿ ಮೃತಪಟ್ಟ ಬಾಲಕನಾಗಿದ್ದಾನೆ. ಬಸವಕಲ್ಯಾಣ ನಗರದ ಆರ್.ವಿ ಶಾಲೆಗೆ ಸೇರಿದ ಶಾಲಾ ವಾಹನ(ಮಿನಿ ಬಸ್) ಹರಿದು ಘಟನೆ ಜರುಗಿದೆ. ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ