ಚಿತ್ರದುರ್ಗ:-ಟೆಕ್ನಾಲಜಿ ಕ್ಲಿನಿಕ್, ಕೈಗಾರಿಕಾ ಯಾಂತ್ರೀಕರಣವು ಒಂದು ದೊಡ್ಡ ಪದ. ತಾಂತ್ರಿಕ ಯುಗದಲ್ಲಿ ಕೈಗಾರಿಕೋದ್ಯಮದಲ್ಲಿ ಸ್ಪರ್ಧಾತ್ಮಕತೆಗೆ ಯಾಂತ್ರೀಕರಣವು ಒಂದು ಕಾರ್ಯತಂತ್ರದ ಗುಣಕವಾಗಿದೆ. ಇದು ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಶ್ರಮ ಮತ್ತು ವ್ಯಾತ್ಯಾಸ ಕಡಿಮೆ ಮಾಡುತ್ತದೆ. ಸುರಕ್ಷತೆ ಮತ್ತು ಗುಣಮಟ್ಟ ಸುಧಾರಿಸುತ್ತದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ್ ಹೇಳಿದರು. ಚಳ್ಳಕೆರೆಯ ನಗರದ ಎಪಿಎಂಸಿ ಯಾರ್ಡ್ ಮುಂಭಾಗದ ಚೇಂಬರ್ ಆಫ್ ಕಾಮರ್ಸ್ ಸಮುದಾಯ ಭವನದಲ್ಲಿ ಸೋಮವಾರ ಬೆಳಿಗ್ಗೆ 11:30ಕ್ಕೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೆ.ಸಿ.ಟಿ.ಯು, ಟೆಕ್ಸಾಕ್ ಹಾಗೂ ಜಿಲ್ಲಾ ಕೈಗಾರಿಕಾ