ದಾಂಡೇಲಿ : ಸ್ನೇಹಜೀವಿ ಫೌಂಡೇಶನ್ ಹಾಗೂ ಅಕ್ಷರ ದೀಪ ಫೌಂಡೇಶನ್ ಇವರು ಕೊಡಮಾಡುವ 'ವೀರ ಭಾರತೀಯ' ರಾಷ್ಟ್ರೀಯ ಪ್ರಶಸ್ತಿಗೆ ಹಳೆ ದಾಂಡೇಲಿಯ ನೀಲಾ ಮಾದರ ಅವರು ಭಾಜನರಾಗಿದ್ದಾರೆ. ಈ ಬಗ್ಗೆ ಗುರುವಾರ ಸಂಜೆ 6:00 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿರುವ ನೀಲಾ ಮಾದರವರ ಸಮಾಜ ಸೇವೆ ಹಾಗೂ ನುಡಿಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಧಾರವಾಡದ ಸಾಹಿತ್ಯ ಭವನದಲ್ಲಿ ನಡೆದ ಸಮಾರಂಭದಲ್ಲಿ ನೀಲಾ ಮಾದರ ಅವರಿಗೆ ಈ ಗೌರವವನ್ನು ನೀಡಿ ಪುರಸ್ಕರಿಸಲಾಯಿತು.