ಶಿರಸಿ: ದೀಪಾವಳಿ ನಿಮಿತ್ತ ಪರಸ್ಪರ ಎಣ್ಣೆ ಎರೆದುಕೊಂಡ ಸೋಂದಾ ಸ್ವರ್ಣವಲ್ಲೀ ಸ್ವಾಮಿದ್ವಯರು
ಶಿರಸಿ: ದೀಪಾವಳಿ ಹಬ್ಬದ ನಿಮಿತ್ತ ಆಚರಿಸಲಾಗುವ ನರಕ ಚತುರ್ದಶಿ ನಿಮಿತ್ತ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರು ಹಾಗೂ ಹಸಿರುಶ್ರೀ ಖ್ಯಾತಿಯ ಶ್ರೀಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮೀಜಿಗಳು ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಸೋಮವಾರ ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ಅಭ್ಯಂಜನ ನಡೆಯಿತು. ಉಭಯ ಶ್ರೀಗಳವರು ಗೋಶಾಲೆಗೆ ತೆರಳಿ ಗೋವುಗಳಿಗೆ ಎಣ್ಣೆಶಾಸ್ತ್ರ ನೆರವೇರಿಸಿದರು. ಗೋವುಗಳಿಗೆ ಶ್ರೀ ದೇವರ ಪ್ರಸಾದವನ್ನು ಹಾಕಿದರು. ಗೋವಿಗೆ ಗ್ರಾಸವನ್ನು ನೀಡಿದರು. ಬಳಿಕ ಶ್ರೀ ಮಠದಲ್ಲಿ ಉಭಯ ಶ್ರೀಗಳು ಪರಸ್ಪರ ಎಣ್ಣೆ ಎರೆದುಕೊಳ್ಳವ ಶಾಸ್ತ್ರವನ್ನು ಪೂರೈಸಿದರು.