ಹುಲಸೂರ: ಪಟ್ಟಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅದ್ಧೂರಿಯಾಗಿ ಆಚರಣೆ
Hulsoor, Bidar | Oct 12, 2025 ಹುಲಸೂರ:ಜೀವನದಲ್ಲಿ ಹಲವು ಕೋಲೆ ಸುಲಿಗೆ ಮಾಡಿ, ರಾಮ ರಾಮ ಎನ್ನುತ್ತಾ ಕೊನೆಗೆ ರಾಮಯಣ ಬರೆದ ಮಾಹಪುರುಷ ಖುಷಿ ಮಹರ್ಷಿ ವಾಲ್ಮೀಕಿ ರವರು ಎಂದು ಹುಲಸೂರ ಪುಜ್ಯರಾದ ಡಾ ಶಿವಾನಂದ ಸ್ವಾಮಿಗಳು ನುಡಿದರು. ಪಟ್ಟಣದಲ್ಲಿ ಜರುಗಿದ ಮಹರ್ಷಿ ವಾಲ್ಮೀಕಿ ರವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಂಬಿಗರ ಚೌಡಯ್ಯ ನವರ ಹಾಗು ಮಹರ್ಷಿ ವಾಲ್ಮೀಕಿ ರವರ ಆದರ್ಶ ವನ್ನು ಪಾಲಿಸಿದರೆ ನಿಮ್ಮ ಜೀವನ ಸುಖಮಯವಾಗುತ್ತೆ. ಇದರ ಜೊತೆಗೆ ಕುಡಿಯುವದನ್ನು ಬಿಟ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗು ಸಂಸ್ಕಾರ ಕೊಡೆಸುವ ಕೆಲಸ ಕೋಳಿ ಸಮಾಜದಿಂದ ಆಗಲಿ ಎಂದರು. ವಿಧಾನ ಪರಿಷತ್ತನ್ ಮಾಜಿ ಸದಸ್ಯ ವಿಜಯಸಿಂಗ್ ಪಾಲ್ಗೊಂಡಿದ್ದರು