ನವಲಗುಂದ: ನವಲಗುಂದ ತಾಲೂಕಿನ ಯಮನೂರ ಗ್ರಾಮದಲ್ಲಿ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಶಾಸಕ ಎನ್.ಎಚ್.ಕೋನರಡ್ಡಿ ಭಾಗಿ
ನವಲಗುಂದ ತಾಲೂಕಿನ ಯಮನೂರ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2006-2007ನೇ ಸಾಲಿನ 7ನೇ ತರಗತಿಯ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮೀಲನ & ಗುರುವಂದನಾ ಸಮಾರಂಭದಲ್ಲಿ ಶಾಸಕರಾದ ಎನ್. ಎಚ್.ಕೋನರಡ್ಡಿ ಅವರು ಭಾಗವಹಿಸಿ ಹಳೆಯ ವಿದ್ಯಾರ್ಥಿಗಳನ್ನು  ಅಭಿನಂದಿಸಿ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ  ಕಲ್ಲಪ್ಪ ಯಕ್ಕುಂಡಿ, ಬಸಪ್ಪ ಕುರಹಟ್ಟಿ, ನಿಂಗಪ್ಪ ಬಾರಕೇರ, ಚನ್ನಬಸಪ್ಪ ಪಡೆಸೂರ, ಮಡಿವಾಳಯ್ಯ ಕಂಬಿ, ವಿನೋದರಾವ ಬರ್ಗೆ, ಹೇಮರಡ್ಡಿ ನಿಂಗರಡ್ಡಿ, ರುದ್ರಗೌಡ ಸರನಾಡಗೌಡ್ರ, ಶ್ರೀಮತಿ ಪ್ರೇಮಾ ಮಾರುತಿ, ಪಿ ಎಸ್ ಕುರಹಟ್ಟಿ, ಶರಣು ಯಮನೂರ, ವಿಠ್ಠಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.