ಹನೂರು: ಮಲೆ ಮಹದೇಶ್ವರದಲ್ಲಿ ಆನೆ ಸೊಂಡಲಿಗೆ ಭಯದಿಂದಲೆ ತಲೆ ಕೊಟ್ಟ ಭಕ್ತರು
ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಶ್ರೀ ಮಹದೇಶ್ವರ ಸ್ವಾಮಿಯ ದರ್ಶನಕ್ಕಾಗಿ ಆಗಮಿಸಿದ್ದ ಭಕ್ತರು, ತದನಂತರ ಕ್ಷೇತ್ರದ ಆನೆ ಉಮಾ ಮಹೇಶ್ವರಿಯ ಆಶೀರ್ವಾದ ಪಡೆಯಲು ಮುಂದೆ ಬಂದ ಸಂದರ್ಭದಲ್ಲಿ, ಕುತೂಹಲದ ಜೊತೆಗೆ ಆತಂಕದ ಕ್ಷಣಗಳೂ ಕಂಡುಬಂದವು. ಆನೆ ಸೊಂಡಲನ್ನು ಎತ್ತಿ ಭಕ್ತರಿಗೆ ಆಶೀರ್ವಾದ ನೀಡುತ್ತಿದ್ದ ಸಂದರ್ಭದಲ್ಲಿ, ಕೆಲ ಭಕ್ತರು ಭಕ್ತಿಯಿಂದ ತಲೆಯನ್ನು ನಮನದಿಂದ ಕೊಟ್ಟರೂ ಕೂಡ, ಆನೆ ಹತ್ತಿರ ಬರುತ್ತಿದ್ದಂತೆ ನಾ ಮುಂದು ತಾ ಮುಂದುಬಎಂಬ ದ್ವಂದ್ವದಲ್ಲಿ ತಕ್ಷಣ ಹಿಂದಕ್ಕೆ ಹೆಜ್ಜೆ ಹಾಕಿದ ದೃಶ್ಯಗಳು ಗಮನ ಸೆಳೆದವು.ಆದರೂ, ಉಮಾ ಮಹೇಶ್ವರಿ ಆನೆ ಶಾಂತ ಮತ್ತು ಸ್ಥಿರವಾಗಿ ಎಲ್ಲ ಭಕ್ತರಿಗೆ ಆಶೀರ್ವಾದ ನೀಡಿದ ರೀತಿಯು ಭಕ್ತರಲ್ಲಿ ನಂಬಿಕೆ ಮೂಡಿಸಿತು